ನೀ
ಧನಿಯಾಗುವ ಮೊದಲೇ ನಾ ನಿನ್ನ ಕವಿದ ಹಾಗೆ..
ನೀ
ಪದವಾಗುವ ಮೊದಲೇ ನಾ ನಿನ್ನ ಮುತ್ತಿಟ್ಟ ಹಾಗೆ..
ನೀ
ರಾಗವಾಗುವ ಮೊದಲೇ ನಾ ನಿನ್ನ ಆವರಿಸಿದ ಹಾಗೆ..
ಮಿಡಿದ
ತಂತಿಯ ಕಂಪನ ನಿನ್ನ ತುಟಿಯಂಚಲಿ ನಾ ಮೂಡಿಸಿದ ಹಾಗೆ..
ನನ್ನೆದೆಯ
ತಣ್ಣಗಿನ ತಲ್ಲಣ ನಿನ್ನ ಸ್ಪರ್ಶದಿಂದ ದೂರಾದ ಹಾಗೆ..
ನಿನ್ನ
ಘಮಕೆ ನಾ ಸೋತ ಹಾಗೆ.. ನನ್ನ ತೊಳಲಿ ನೀ ಬಳಸಿ ಹಬ್ಬಿದ ಹಾಗೆ..
ನಿನ್ನ
ಮೃದು ಕೊರಳ ನಾ ಬಿಗಿದಪ್ಪಿದ ಹಾಗೆ.. ನನ್ನ ಎದೆಯ ಮೇಲೆ ನೀ ವಿಜಯಿಸಿದ ಹಾಗೆ..
ಉಸಿರು
ಬೆರೆತು., ಬೆವರ ಮರೆತು.,
ಕಣ್ಣು
ಕಲೆತು., ಕತ್ತಲೆ ಅಳಿದ ಹಾಗೆ..
ನನ್ನ
ಹಿಡಿದೆಳೆದು ನೀ ಕಚ್ಚಿದ ಹಾಗೆ.. ನಿನ್ನ ಮಲಗಿಸಿ ನಾ ನಿನ್ನೆ ದಿಟ್ಟಿಸಿ ಕೂತ ಹಾಗೆ..
ನನ್ನ
ಅಂಗೈಯೊಳಗೆ ನೀ ಕರಗಿದ ಹಾಗೆ.. ನಿನ್ನ ಒಲವಲಿ ನಾ ಮೈ ಮರೆತ ಮಗುವಿನ ಹಾಗೆ..
ಕನಸಿದು
ನನಗೆ ಹೊಳೆಯುವ ಚುಕ್ಕಿಯ ಹಾಗೆ..
ನೀ ಬರಲು ಮರೆಯದಿರು ಪ್ರತಿ
ಸಂಜೆಯೊಡನೆ ಬರುವ ಇರುಳಿನ ಹಾಗೆ..
Good one 😊👍
ReplyDeleteThank you :)
DeleteSo 2016 edition started with a bang!
ReplyDeleteha ha ha :) Thank you.
DeleteThis comment has been removed by the author.
DeleteSo 2016 edition started with a bang!
ReplyDeleteSuch beautiful words.. so sensitive n loving.. super guru
ReplyDeleteSuch beautiful words.. so sensitive n loving.. super guru
ReplyDeleteIt seems that you go to some place within yourself where words live....
ReplyDeleteನೀ ಕಡಲ ಜೀವ., ನಾ ಅಲೆಯ ಭಾವ.. ನಿನ್ನಲ್ಲೇ ನಾನಿರುವೆ., ನೀ ನನ್ನೇಲ್ಲಿ ಹುಡುಕುವೆ ??
Deleteಜೋರಾಗಿ ಕೂಗೊಮ್ಮೆ ನಾ ನಿನ್ನೊಳ ಪ್ರತಿಧನಿಸುವೆ..
lovely Writing...
ReplyDelete:)
DeleteYour Imagination gratifies unconditional love..
ReplyDelete