Tuesday 25 August 2015

ಕಾಣದ ಕಣ್ಣು..

ಅ0ದು 2009 ಜನವರಿ 9, ಬೆಳ್ಳಗೆ ತುಂಗೆಯಲ್ಲಿ ಮಿಂದೆಂದ್ದು ಗುರು ರಾಯರ ದರ್ಶನ ಆದ ತಕ್ಷಣ ಅವನ ಮನಸ್ಸಿನ ತುಡಿತದ ವೇಗದಲ್ಲೇ ಬಳ್ಳಾರಿಯ ಬಸ್ಸು ಏರಿದ್ದ ಕರ್ಣ. ಅದು ಅವನ ಪ್ರೀತಿ ದೇವತೆಯ ವರುಷದ ದರ್ಶನಕ್ಕೆ ಹೊರಟ ಯಾತ್ರೆಯಂತಿತ್ತು. ಕರ್ಣ ತನ್ನ 5ನೇ ಸೆಮಿಸ್ಟರ್ ಪರೀಕ್ಷೆ ಮುಗಿದ ದಿನದ ಸಂಜೆಯೇ ಬೆಂಗಳೂರಿನಿಂದ ಮಂತ್ರಾಲಯದ ರೈಲು ಹತ್ತಿದ್ದ. ಅದು ಸುಮಾರು 4 ಗಂಟೆಗಳ ಹಾದಿ, ರಸ್ತೆ ಕೆಟ್ಟಿದ್ದರಿಂದ ಇನ್ನೊಂದುಗಂಟೆ ತಡವಾಗಿ ಬಳ್ಳಾರಿ ತಲುಪಿದ್ದ ಕರ್ಣ. ಸಂಜೆ 4 ಗಂಟೆಯ ತಣ್ಣನೆ ಬಿಸಿಲು ಬಳ್ಳಾರಿಯಧೂಳಿಗೆ ತನ್ನ ರಂಗನ್ನು ಇನ್ನಷ್ಟು ಕೆಂಪಾಗಿಸಿ ಕೊಂಡಿತ್ತು. ಬಸ್ಸು ಇಳಿಯುವ ಹೊತ್ತಿಗಾಗಲೇ ಕಾದುನಿಂತಿದ್ದ ಗೆಳೆಯ ಶರಣ ದೊಡ್ಡ ನಗೆಯೊಂದಿಗೆ ಬಂದು ಇವನ Bag ಇಳಿಸಿ ಬಿಗಿಯಾಗಿ ಅಪ್ಪಿ ಉಸಿರುಕಟ್ಟುವಂತೆ ಮೇಲಕ್ಕೆತ್ತಿದ., ಗೆಳೆಯನ ಅಪ್ಪುಗೆಯೆಹಾಗೆ ಅದೆಷ್ಟೇ ಬಿಗಿಯಾಗಿದ್ದರು ಒಂಥರಾ ಹಿತ..
ಕರ್ಣನ ಮೈ ಧೂಳು ಶರಣನ ಬಿಳಿ ಪಟ್ಟೆ ಪಟ್ಟೆ ಅಂಗಿಯ ಕೆನ್ನೆ ಕೆಂಪಾಗಿಸಿತ್ತು., ಅದಕ್ಕೆ ನಗುತ್ತಲೇ ಗೊಣಗಾಡಿದವ, ಕರ್ಣನ Bag ತೆಗೆದುಕೊಂಡು ತಾನು ತಂದಿದ್ದ ಗಾಡಿಯೆಡೆಗೆ ನಡೆದ. ಕರ್ಣನಿಗೆ ಇವೆಲ್ಲದರ ನಡುವೆ ಎದೆಯಾಳದಲ್ಲಿ ನಡೆಯಲಿರುವ ಯುದ್ದದ ತಯಾರಿಯ ಸೂಚನೆ ಅದಾಗಲೇ ಸಿಕ್ಕಾಗಿತ್ತು !
ಗಾಡಿ ರೋಯಲ್ ಸರ್ಕಲ್ನಿಂದ ದುರ್ಗಮ್ಮ ಗುಡಿಯ ಕಡೆಗೆ ಚಲಿಸಿತ್ತು, “ ನೀ ಬರೀ ಅಕಿನ್ ಸಲುವಾಗಿ ವರ್ಷಕ್ಕ್ ಒಮ್ಮೆ ಬಂದ್ ಹೋಗ್ತೀಯಲ್ಲಲೇ, ನನ್ ಕರದ್ರೆ ಮಾತ್ರ ನಿಂಗ ಬರಕ್ ಆಗಂಗ್ ಇಲ್ಲ ಅಲೆನ್ ಲೆ, ಕೊಡಿ “ ಅಂದ ಶರಣ. ಆದರೆ ಇದ್ಯವಾದಕ್ಕೂ ಕರ್ಣನಿಂದ ಉತ್ತರ ಸಿಗೋದಿಲ್ಲ ಅನ್ನೊ ಸತ್ಯ ಗೊತ್ತಿತ್ತಾದರೂ, ಪ್ರತಿ ಸಲ ಕರ್ಣನನ್ನ ಕರೆದುಕೊಂಡು ಬರುವಾಗ ಮತ್ತೆ ಬಿಡುವಾಗ ಶರಣ ತಪ್ಪದೆ ಈ ಮಾತು ಅನ್ನದೆ ಇರುತ್ತಿರಲಿಲ್ಲ.
ವಿದ್ಯಾನಗರದ ಮಹಡಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಶರಣನೊಂದಿಗೆ ಅವನದೆ ಓರಿಗೆಯ ಇನ್ನಿಬ್ಬರು ಹುಡುಗರಿದ್ದರು, ಅವರು ಶರಣನಿಗೆ ಸಹೋದರ ಸಂಬಂಧಿಗಳು ಕೂಡ. ಕರ್ಣ ಸ್ನಾನ ಮುಗಿಸಿ ಬರುವವೇಳೆಗಾಗಲೇ ಶರಣ ಎರಡು ಸಿಗರೇಟ್ ಹೊಸಕಿದ್ದ.
ಅರ್ಧ ತೋಳಿನ ಶರ್ಟ್ ಜೊತೆಗೆ ಜೀನ್ಸ್ ಧರಿಸಿ ಇಬ್ಬರು ರೂಮಿನಿಂದ ಹೊರಬಿದ್ದರು. ತಮ್ಮ PU ದಿನಗಳ ಮೆಲುಕು ಇಡೀ ಸಂಜೆಯನ್ನು ಕಾಲ್ನಡಿಗೆಯಲ್ಲಿ ನುಂಗಿತ್ತು. ಕರ್ಣ ಮತ್ತು ಶರಣ ಇಬ್ಬರು ಪಿ‌ಯೂ‌ಸಿ ಮುಗಿಸಿದ್ದು ಬಳ್ಳಾರಿಯ ಶ್ರೀ ಚೈತನ್ಯ ಕಾಲೇಜಿನಲ್ಲಿ. ಕರ್ಣ, ರಾಮ್ ಮತ್ತೆ ಶರಣ ಹಾಸ್ಟೆಲ್ ನ roommates.
ಸಂಜೆ 7ರ ಸುಮಾರಿಗೆ ಕರ್ಣನ ತಳಮಳ ಅರಿತ ಗೆಳೆಯ, ಅವನನ್ನು ಕೂಡಿಸಿಕೊಂಡು ಅವಳ ಮನೆಯ ಕಡೆಗೆ ಗಾಡಿ ತಿರುಗಿಸಿದ್ದ. ಅದು ಎಂದು ಸವೆಯಾದ ಮೇಘಳ ಮನೆಯ ಹಾದಿ !
ಹೆಸರೇ ಹೇಳುವಂತೆ ಆವಳೊಂದು ತಣ್ಣನೆ ಹಿಮದ ಹನಿಗಳು ತುಂಬಿದ ಮೋಡದ ಹಾಗೆ. ತಂಪನೆ ಕಣ್ಣು, ಮೃದುವಾದ ನೋಟ. ತಿಳಿನೀರಿನಂತೆ ಗಾಳಿಗೆ ಕಡಲುವ ಮುಂಗುರುಳು, ಸೃಜನ ನಡೆ. ನಿಷ್ಕಲ್ಮಶ ನಗು Simple is beauty ಅಂತ mostly ಇವಳನ್ನ ನೋಡಿದವ್ರೆ ಹೇಳಿರ್ಬೇಕೆನೋ !! ಗೊತ್ತಿಲ್ಲ. ಶರಣನ ಮಾತು ಮತ್ತು ಗಾಡಿಗಳ ಸದ್ದಿನ ನಡುವೆಯೇ ಕರ್ಣ ತನ್ನೊಳಗೆ ತಾನು ಮಾತಾಡುತ್ತ ಕಳೆದು ಹೋಗಿದ್ದ.
ನಾಳೆ ಜನವರಿ 10, ಮೇಘ ಹುಟ್ಟಿದ ದಿನ. ಕರ್ಣ ಪಿ‌ಯೂ‌ಸಿಗಾಗಿ ಬಳ್ಳಾರಿಯಲ್ಲಿ ಕಾಲೇಜು ಸೇರಿದ್ದು 2005ರಲ್ಲಿ. ಅಂದಿನಿಂದ ಕರ್ಣನಿಗೆ ಮೇಘಳ ಕಣ್ಣುಗಳು ಚಿರ ಪರಿಚಿತ. ಕರ್ಣನ ಎದೆಯೊಳಗೆ ಬಡಿತವೊಂದು ಹುಟ್ಟಿ ಇವತ್ತಿಗೆ ಸುಮಾರು ನಾಲ್ಕುವರೆ ವರ್ಷ ಆಯ್ತು ! ಹೀಗೆ ಪ್ರತಿ ವರ್ಷವೂ ಇವತ್ತಿನ ದಿನ ಅಂದ್ರೆ ಜನವರಿ 9 ತಪ್ಪದೆ ಕರ್ಣ, ಮೇಘಳ ಮನೆಯ ತಿರುವು ಕಾಯ್ತ ಇರ್ತನೆ. ರಾತ್ರಿ 12ಕ್ಕೆ ಅವಳ ಮನೆ ಹಿಂದೆ ರೋಡ್ ಪಕ್ಕದಲ್ಲಿರೋ ಕಾನ್ವೆಂಟ್ ಸ್ಕೂಲ್ ನ ಮುಂದೆ ನಿಂತ್ರೆ ಮೊದಲನೆಮಹಡಿಯಲ್ಲಿರೋ ಅವಳ ರೂಮಿನ ಕಿಡಕಿ ಸ್ಪಷ್ಟವಾಗಿ ಕಾಣಿಸುತ್ತೆ. ಹೀಗೆ ಕೊರೆಯುವ ಚಳಿಯ ಮಧ್ಯ ರಾತ್ರಿ ರೋಡಲ್ಲಿ ನಿಂತು ಪ್ರತಿ ವರ್ಷ ಜನವರಿ 9 ರ ರಾತ್ರಿ ಕಳೆದು, ಅವಳ ರೂಮಿನ ಲೈಟ್ ಆಫ್ ಆದಮೇಲೆಯೇ ಕರ್ಣ ಅಲ್ಲಿಂದ ಹೊರಡ್ತಿದದ್ದು. ಇದು ಕರ್ಣನಿಗೆ ಅವಳ 4ನೇ ಹುಟ್ಟುಹಬ್ಬ.
ಕರ್ಣ ಅವಳನ್ನ 1st year ಇಂದನೇ ಇಷ್ಟ ಪಡ್ತಿದ್ದ. ಹಾಸ್ಟೆಲ್ ಮತ್ತು ಡೇ ಸ್ಕೂಲರ್ಸ್ ಗೆ ಬೇರೆ ಬೇರೆ ತರಗತಿಗಳು, ಅಂದ್ರೆ ಹಾಸ್ಟೆಲ್ ವಿಧ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲೇ ಪಾಠಗಳು ನಡಿತಿತ್ತು. ವಾರದಲ್ಲಿ 2 ಅಥವಾ 3 ಕ್ಲಾಸ್ ಗಾಗಿ ಅಷ್ಟೇ ಹಾಸ್ಟೆಲ್ ನ ಹುಡುಗರು, ಹಾಸ್ಟೆಲ್ ನ ಮುಂದೆ, ಕಾಂಪೌಂಡ್ ಗೆ ಹತ್ತಿಕೊಂಡೆ ಇದ್ದ ಕಾಲೇಜಿಗೆ ಬರ್ತಿದ್ರು. ಹಾಗೆ ಬಂದಾಗಲೆ ಕರ್ಣನಿಗೆ ಮೇಘಳ ದರುಶನ ಭಾಗ್ಯ. ಇದನ್ನು ಬಿಟ್ಟು ಹಾಸ್ಟೆಲ್ ನ ಹುಡುಗರು ಕಾಲೇಜಿಗೆ ಬರುವುದು ನಿಶಿದ್ದವಾಗಿತ್ತು. ಕೆಲವೊಮ್ಮೆ classes cancel ಆದಾಗ ತಿಂಗಳು ಗಟ್ಟಲೆ ಮೇಘಳನ್ನು ನೋಡಲು ಸಾಧ್ಯವೇ ಆಗ್ತಿರ್ಲಿಲ್ಲ. ಪ್ರತಿ ತಿಂಗಳು ಮೂರನೇ ಭಾನುವಾರ ಹಾಸ್ಟಲ್ ನ ಹುಡುಗರಿಗೆ ಅರ್ಧ ದಿನದ ರಜೆ. ಮಧ್ಯಾನ 12 ರಿಂದ ಸಂಜೆ 6 ರ ವರೆಗೆ ಹಾಸ್ಟೆಲ್ ನಿಂದ ಹೊರಹೋಗಿ ಬರಲು ಬಿಡುತಿದ್ದರು. ಕರ್ಣ, ರಾಮ್ ಮತ್ತೆ ಶರಣ ಇವರ ಎರಡು ವರ್ಷಗಳ ಎಲ್ಲಾ ಭಾನುವಾರಗಳು ಕಾಲೇಜಿನ ಹತ್ತಿರದಲ್ಲೇ ಇದ್ದ ಮೇಘಳ ಮನೆಯ ಹತ್ತಿರವೇ ಕಳೆದು ಹೋಗಿದ್ದವು.
ಪಣಿ, ಕರ್ಣನ ಇನ್ನೊಬ್ಬ ಆತ್ಮೀಯ ಸ್ನೇಹಿತ, ಪಿ‌ಯೂ‌ಸಿ ಯ ಮೊದಲನೆ ವರ್ಷ ಬಳ್ಳಾರಿಯಲ್ಲಿಯೇ ಇದ್ದ ತನ್ನ ಅಕ್ಕನ ಮನೆಯಿಲ್ಲಿ ಇದ್ದುಕೊಂಡು ಮುಗಿಸಿ ನಂತರ ಹಾಸ್ಟೆಲ್ ಸೇರಿದವ, ಹೀಗಾಗಿ ಪಣಿಗೆ ಲೋಕಲ್ ಮತ್ತು ಹಾಸ್ಟಲ್ ಎರಡು ಕಡೆಯು ತುಂಬಾ ಜನ ಗೆಳೆಯರಿದ್ದರು., ಅದರಲ್ಲಿ ಮೇಘಳಿಗೂ ತುಂಬಾ ಆತ್ಮೀಯಾರದವರು ಸಹ ಪಣಿಗೆ ಗೆಳೆಯಾರಾಗಿದ್ದರು, ಮುಂದೆ ಪಣಿಯ ಮೂಲಕವೇ ಕರ್ಣನಿಗೆ ಸೌಮ್ಯ ಪರಿಚಯಳಾಗುತ್ತಾಳೆ.
ಕರ್ಣ ಬಳ್ಳಾರಿಯಲ್ಲಿದ್ದ ಎರಡು ವರ್ಷದಲ್ಲಿ ಯಾವತ್ತೂ ಸಹ ಮೇಘಳನ್ನು ಮಾತಾಡಿಸುವ ಅಥವಾ ಅವಳೆಡೆಗೆ ತನ್ನಲ್ಲಿದ್ದ ಪ್ರೀತಿಯನ್ನು ಹೇಳಿಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ. ಕರ್ಣನ ಸ್ನೇಹಿತರೆಲ್ಲರಿಗೂ ಮೊದಮೊದಲು ಇದು ಇವನ ಹೇಡಿತನ ಅನಿಸಿದರು ಮುಂದಿನ ದಿನಗಳಲ್ಲಿ ಅವನ ಈ ನಡೆಯೆ ಇಷ್ಟವಾಗ ತೊಡಗಿತು.
ಕರ್ಣನೇ ಹಾಗೆ., ಧೀರ್ಘ ಸಮುದ್ರದಲ್ಲಿ ಪುಟ್ಟ ದೋಣಿಯನ್ನೊಂದನ್ನು ಹತ್ತಿ ಹೊರಟ ಒಂಟಿ ನಾವಿಕನ ಹಾಗೆ. ಆತ ಇಷ್ಟಪಡಲು ಶುರುವಿಟ್ಟದ್ದು ಅವಳ ಕಣ್ಣುಗಳನ್ನು ಮಾತ್ರ., ಕಣ್ಣು ಮನುಷ್ಯನ ಭಾವನೆಗಳನ್ನು ಹೊಮ್ಮಿಸುತ್ತವೆಯಂತೆ, ನಿಜವೆನೋ., ಕರ್ಣ ಪ್ರೀತಿಸಿದ್ದು ಮೇಘಳ ಆಂತರ್ಯವನ್ನ.. ಅವಳನ್ನ ನೋಡುತ್ತಲೇ ಖುಷಿ ಪಡುತಿದ್ದವನಿಗೆ ಅವಳನ್ನ ಹಿಡಿಯಾಗಿ ಪಡಿಯಬೇಕು ಅಂತ ಯಾವತ್ತಿಗೂ ಅನಿಸಲೆ ಇಲ್ಲ. Loving someone means seeing how happy they are, it delights you even when they don't belong in your arms..
ನೀ ಯಾಕೋ ಹೀಗೆ, ಅವ್ಳಿಗೆ ಯಾಕ್ ಹೇಳಲೆ ಇಲ್ಲ ಇದುವರೆಗೂ” ಅಂಥ ಕೇಳಿದವರಿಗೆಲ್ಲಾ ಕರ್ಣ., “There must be a way to bottle up this happiness I’m feeling so I can take a swig from it when I’m feeling low. I think it’s called memory & If there is anything better than to be loved, it is loving J ಅವ್ಳ ಸಿಹಿ ಕನಸೆ ಸಾಕು ನಾ ಖುಷಿಯಾಗಿರೋಕೆ “ ಅಂತ ಹೇಳಿ ಕಣ್ಣಲ್ಲೇ ನಗುತ್ತಿದ್ದ. But, the most painful love is the love left unshown and affection left unknown., ಅನ್ನೋದು ಕರ್ಣನಿಗೆ ಆಗಲೇ ಅರ್ಥವಾಗಿದ್ದರೆ ಮುಂದೊಂದು ದಿನ ಮೇಘ ದೇವಸ್ಥಾನದ ಮೆಟ್ಟಿಲ ಮೇಲೆ ಕೂಳಿತು ಕಣ್ಣಿರಾಗಿ ಕರಗುತ್ತಿರಲಿಲ್ಲವೇನೋ !
ಪಿ‌ಯೂ‌ಸಿ ಮುಗಿಸಿ ಬೆಂಗಳೂರಿಗೆ ಬಂದ ನಂತರ ಕರ್ಣನಿಗೆ ಮೇಘಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿರಲಿಲ್ಲ. ಮೇಘ ಬಳ್ಳಾರಿಯ Bellary Engineering College ಸೇರಿದ್ದಳು. ಅದೇ ಕಾಲೇಜಿಗೆ ಕರ್ಣನ ಹಾಸ್ಟೆಲ್ ನ, ಬಳ್ಳಾರಿಯ ಸುತ್ತಮುತ್ತಲಿನ ಊರಿನ ತುಂಬಾ ಜನ ಸ್ನೇಹಿತರು ಸೇರಿದ್ದರು. ಅವರೆಲ್ಲರಿಗೂ ಕರ್ಣನ ಪ್ರೀತಿಯ ಬಗ್ಗೆತಿಳಿದಿತ್ತು. ಮೇಘಳನ್ನು ಕಂಡಾಗಲೆಲ್ಲಾ ಕರ್ಣನ ಹೆಸರು ಕಾಲೇಜಿನ ಕಾರಿಡಾರ್ ನಲ್ಲಿ ಸ್ವಲ್ಪ ಜೋರಗೆ ಕೇಳಲ್ಪಡುತಿತ್ತು ! ಇದುಮೇಘಳಿಗೆ ತುಂಬಾ ಇರುಸು ಮುರಿಸು ಉಂಟುಮಾಡುತಿತ್ತು. ಮೇಘ ಕರ್ಣನನ್ನು ಅರಿಯುವ ಮುನ್ನವೇ ಧ್ವೇಷಿಶಲು ಪ್ರಾರಂಭಿಸಿದಳು ! Love is transitory, but hate is for eternity..
ಮೇಘಳಿಗೆ ಈ ರೀತಿಯಲ್ಲಿ ಕರ್ಣನ ಪರಿಚಯ ಸಿಕ್ಕಿತ್ತು. ಇತ್ತ ಕರ್ಣ, ಪಣಿಯ ಸಹಾಯದಿಂದ ಮೇಘಳ ಬಗ್ಗೆ ಮಾಹಿತಿ ಪಡೆದಿದ್ದ. ಅಲ್ಲಿಂದ ಪ್ರತಿವರ್ಷವೂ ಅವಳ ಹುಟ್ಟಿದ ದಿನದಂದು ಬಳ್ಳಾರಿಗೆ ಬಂದು ಅವಳ ಕಣ್ಣುಗಳನ್ನು ಮನಸಿನ್ನ ತುಂಬಾ ತುಂಬಿಕೊಂಡು, ದೂರದಿಂದಲೇ ಶುಭಾಶಯ ಕೋರಿ, ನೆನಪಿನ ಬುತ್ತಿಹೊತ್ತು ವಾಪಸ್ ಆಗುತಿದ್ದ. ಆದ್ರೆ ಆಗಲು ಸಹ ಮೇಘಳನ್ನು ಮಾತಾಡಿಸುವ ಒಂದು ಚಿಕ್ಕ ಆಲೋಚನೆಯನ್ನು ಮಾಡಿರಲಿಲ್ಲ !
ಕರ್ಣ ಹೀಗೆ ಪ್ರತಿ ವರ್ಷ ತನ್ನ ಹುಟ್ಟುಹಬ್ಬಕ್ಕೆ ಬಂದೆ ಬರುತ್ತಾನೆಂಬ ವಿಷಯ ಮೇಘಳಿಗೂ ತಿಳಿದಿತ್ತು, ಆಕೆಯ ಸ್ನೇಹಿತೆಯರು ಈ ಬಗ್ಗೆ ಮೇಘಳನ್ನು ರೇಗಿಸುತ್ತಲು ಇದ್ದರು., ಹಾಗೂ ಇದಕ್ಕೆ ಮೇಘ ಸಿಡಿ ಮಿಡಿಗೊಳ್ಳುತ್ತಿದಳು. ಆದರೆ ಮೇಘ ಮನದಾಳದಲ್ಲೇಲ್ಲೋ ಖುಷಿ ಪಡುತಿದ್ದಾಳ ? ಯಾರಿಗೂ ಗೊತ್ತಿರಲಿಲ್ಲ !

ಕರ್ಣನ ಈ ಪ್ರತಿವರ್ಷದ ಭೇಟಿಗೆ ನೆರವಾಗುತ್ತಿದದ್ದು, ಶರಣ ಹಾಗೂ ಸೌಮ್ಯ.. ಸೌಮ್ಯ ಮೇಘಳ ಅತಿ ಆತ್ಮೀಯ ಗೆಳತಿ. ಕರ್ಣನ ಬಗ್ಗೆ ಮತ್ತು ಮೇಘಳ ಕಡೆಗಿನ ಅವನ ಒಲವಿನ ಬಗ್ಗೆ ಸೌಮ್ಯಳಿಗೆ ತುಂಬು ಹೃದಯದ ಗೌರವವಿತ್ತು. ಹಾಗೂ ಇದನ್ನು ಸದಾ ಅವಳು ಮೇಘಳ ಮುಂದೆ ವ್ಯಕ್ತಪಡಿಸುತ್ತಿದ್ದಳಾದರೂ, ಮೇಘ ಇದಕ್ಕೆ ಕಿವಿಗೊಡುತ್ತಿರಲಿಲ್ಲ. ಕರ್ಣ ಬೆಂಗಳೂರಿಂದ ಹೊರಡುವ ಮುನ್ನವೇ ಸೌಮ್ಯಳಿಗೆ ವಿಷಯ ತಿಳಿಸುತ್ತಿದ್ದ ಹಾಗೂ ಅವಳ ಸಹಾಯ ಕೋರುತ್ತಿದ್ದ. ಇತ್ತ ಬಳ್ಳಾರಿಗೆ ಬಂದ ಕೂಡಲೇ ಕರ್ಣನಿಗೆ ಮೇಘಳ ಸಂಪೂರ್ಣ ದಿನಚರಿ ಸೌಮ್ಯಳಿಂದ ಲಭಿಸುತಿತ್ತು. ಮೇಘ ಮತ್ತು ಸೌಮ್ಯ ಹೆಚ್ಚಿನ ಸಮಯ ಜೊತೆಯಲ್ಲಿಯೇ ಕಳೆಯುತ್ತಿದರಿಂದ ಸೌಮ್ಯಳಿಗೆ ಮೇಘಳ ದಿನಚರಿಯ ಮೇಲೆ ಸಂಪೂರ್ಣ ಹಕ್ಕಿತ್ತು. ಮೇಘ ಮತ್ತು ಸೌಮ್ಯ ಸ್ಕೂಟಿ ಹತ್ತಿ ಮನೆಯಿಂದ ಹೊರಬಿದ್ದ ಕೂಡಲೇ ಅವರ ಬೆನ್ನಲ್ಲೇ ಇನ್ನೊಂದು ಗಾಡಿ ಅವರಿಬ್ಬರನ್ನು ಹಿಂಬಾಲಿಸುತಿತ್ತು., ಅದು ಶರಣ ಮತ್ತು ಕರ್ಣರದ್ದು ! ಹೀಗೆ ಮೇಘ, ಸೌಮ್ಯ ಮರಳಿ ಮನೆ ಸೇರುವ ತನಕ ಕರ್ಣ ಪ್ರತಿ ಹಂತದಲ್ಲೂ ಮೇಘಳ ನಗುಮೊಗವನ್ನು ಕಣ್ಣು ತುಂಬಿಸಿಕೊಳ್ಳುತಿದ್ದ., ಮತ್ತೊಂದು ವರುಷಕ್ಕೆ ಅಗ್ಗುವಷ್ಟು., ಮತ್ತೊಂದು ಯುಗ ಅವಳ ಮುಗುಳ್ನಗೆಯ ನೆನಪಲ್ಲೆ ಬದುಕಿ ಬಿಡುವಷ್ಟು.. How far would you go just to see the person you love smile?
ಆದರೆ ಈ ಸಲ ಪ್ರೀತಿ ಎಂಬುದು ಕರ್ಣನ ಪಾದದ ಅಡಿಯಿಂದ ಶಿರದ ತುದಿಯವರೆಗೂ ನೆತ್ತರರನ್ನು ಹೀರುವ ತವಕದಲ್ಲಿತ್ತು ! ಸೌಮ್ಯ ತುರ್ತು ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಹೋಗಿದ್ದಳಾದರೂ, ಅಲ್ಲಿಂದಲೆ ತನಗಾಗುವ ಸಹಾಯ ಮಾಡುತ್ತಿದ್ದಳು. ಅಂದು ಸಂಜೆ ಸೌಮ್ಯನಿಂದ ಮಾಹಿತಿ ಪಡೆದು ಮೇಘಳನ್ನು ನೋಡ ಹೊರಟ ಕರ್ಣ ಮತ್ತು ಶರಣ, ಅವಳಿಗಾಗಿ ಆಕೆಯ ಮನೆಯ ತಿರುವಿನಲ್ಲೇ ಕಾದು ಕುಳಿತರು. ಮೇಘಳ ಮನೆಯ ತಿರುವಿನಲ್ಲೇ ಪುಟ್ಟದಾದ ಟೀ ಅಂಗಡಿಯೊಂದಿತ್ತು., ಶರಣ ಮತ್ತು ಕರ್ಣನಿಗೆ ಅಂಗಡಿಯ ಭಾಷಾ ಭಾಯ್ ಆಗಿಂದಲೇ ಪರಿಚಯವಾಗಿ ಹೋಗಿದ್ದ., ಇವರಿಬ್ಬರನ್ನು ನೋಡುತ್ತಲೇ ಕಣ್ಣರಳಿಸಿ ಮಾತಾಡಿಸಿ, ಎರಡು ಕಟ್ ಟೀ ಮತ್ತೊಂದು king ಸಿಗರೇಟು ಮುಂದಿಟ್ಟ, ಅದು ಶರಣ ನ ಬ್ರಾಂಡ್ ಎಂಬುದು ಭಾಷಾ ಭಾಯ್ ಮರೆತಿರಲಿಲ್ಲ., “ಪಲ್ ಪಲ್ ದಿಲ್ ಕೆ ಪಾಸ್, ತುಮ್ ರೆಹೆತೆ ಹೋ., ಜೀವನ್ ಮೀಠಿ ಪ್ಯಾಸ್ ತುಮ್ ಕೆಹೆತೆ ಹೋ..” ಅಂಗಡಿಯ ರೇಡಿಯೋ ದಲ್ಲಿ ಕಿಶೋರ್ ಹಾಡಗಿದ್ದ.. ಎರಡು ಗಂಟೆ ಕಾಯುತ್ತಲೇ ಕಳೆದಿತ್ತು ಆದರೆ ಇತ್ತ ಮೇಘ ಮನೆಯಿಂದಾಚೆಗೆ ಬರಲೇ ಇಲ್ಲ. ಮೇಘಳಿಗೆ ಯಾರು ಹೇಳದಿದ್ದರು, ಈ ಸಂಜೆ, ಈವೇಳೆಯಲ್ಲಿ, ನನ್ನ ಕಣ್ಣುಗಳನ್ನೇ ಹುಡುಕುತ್ತಾ ಜೀವವೊಂದು ತನ್ನ ಮನೆಯ ತಿರುವಿನಲ್ಲಿ ಕಾದಿದೆ ಎಂಬುದು ಮೇಘಳಿಗೆ ಸ್ಪಷ್ಟವಾಗಿ ಗೊತ್ತಿತ್ತು. ಅದು ಮೇಘಳಿಗೆ, ಕರ್ಣನ ಪ್ರೀತಿಯ ಮೇಲೆ ತನಗರಿವಿಲ್ಲದೆ ಬಂದಿದ್ದ ಕಾಡು ಭರವಸೆ !
ಬಹಳ ಹೊತ್ತು ಕಾದ ನಂತರ, ಶರಣ ಮನೆಗೆ ವಾಪಸ್ಸು ಹೋಗೋಣವೆಂದು ಕರ್ಣನ ಮನವೊಲಿಸಲು ಪ್ರಯತ್ನಿಸತೊಡಗಿದ., ಕರ್ಣ ಮೇಘಳನ್ನು ನೋಡುವ ತನಕ ಅಲ್ಲಿಂದ ಕದಲವುದಿಲ್ಲ ಎಂಬುದು ಶರಣನಿಗೆ ಗೊತ್ತಿತ್ತು. ರಾತ್ರಿ 10.30 ರ ಆಸು ಪಾಸಿಗೆ ಇಬ್ಬರು ಶಾಂತ ಆಂಟಿ ಯ ಮೆಸ್ ನಲ್ಲಿ ಊಟ ಮುಗಿಸಿ ಶರಣನ ರೂಮಿಗೆ ವಾಪಸ್ ಆದರು. ಶರಣ ಊಟಕ್ಕು ಮುನ್ನವೆ 2 ಪೆಗ್ ಇಳಿಸಿದ್ದ. ಕರ್ಣ ಶರಣನನ್ನು ರೂಮಿನಲ್ಲೇ ಬಿಟ್ಟು, ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿ ಅವನ ಬೈಕ್ ತೆಗೆದುಕೊಂಡು ಪ್ರತಿ ಸಲದಂತೆ ಈ ಬಾರಿಯೂ ಮೇಘಳ ಮನೆಯ ಹಿಂದಿನ ರಸ್ತೆಯಲ್ಲಿ ನಿಂತು ಅವಳ ಹುಟ್ಟಿದ ದಿನವನ್ನು ಸ್ವಾಗತಿಸಲು ಹೊರಟ.

ಸಮಯ 11.40 ಆಗಿರಬಹುದು, ಬಳ್ಳಾರಿ ಬೆಚ್ಚನೆ ಚಳಿಗಾಲಕ್ಕೆ ಬೇಗನೆ ನಿದ್ದೆಗೆ ಜಾರಿತ್ತು, ಮೇಘಳ ಮನೆ ಸುಭಾಷ್ ನಗರದಲ್ಲಿತ್ತು, ಅದು ಹೆಚ್ಚು ಸದ್ದು ಗದ್ದಲವಿಲ್ಲದ ಪ್ರದೇಶ. ಕರ್ಣ ಯಥಾ ಪ್ರಕಾರ ಆ ಇಂಗ್ಲೀಷ್ ಕಾನ್ವೆಂಟ್ ನ ಮುಂದೆ ಗಾಡಿಯ ಸ್ಟಾಂಡ್ ಹಾಕಿ ಮೇಘಳ ರೂಮಿನ ಕಿಟಕಿಯನ್ನೆ ದಿಟ್ಟಿಸುತ್ತಾ ನಿಂತ. ತಿಳಿ ಹಳದಿ ಬಣ್ಣದ ಕರ್ಟನ್ ನ ಆಚೆಗೆ ಅಲ್ಲೊಂದು ಜೀವ ಕರ್ಣನನ್ನೇ ಕಾಯುತಿತ್ತಾ ?? ಗೊತ್ತಿಲ್ಲ.. ಮೇಘಳನ್ನು ಮನೆಯಲ್ಲಿ ಕರೆಯುತಿದದ್ದು ರಾಜಿ ಅಂತಲೇ. ಕರ್ಣ ಆಗಾಗ ಬೇರೆ ನಂಬರ್ ಗಳಿಂದ ಮೇಘಳಿಗೆ ಫೋನ್ ಮಾಡುತಿದ್ದ., ಆದರೆ ಮಾತಾಡುತ್ತಿರಲ್ಲಿಲ್ಲ. ಕೆಲ ಕ್ಷಣ ಅವಳ ದನಿ ಕೇಳಿ ಕಾಲ್ ಕಟ್ ಮಾಡುತ್ತಿದ್ದ. ಆದರೆ ಅವಳ ಹುಟ್ಟುಹಬ್ಬಕ್ಕೆ ಮಾತ್ರ ತನ್ನ ನಂಬರ್ ನಿಂದಲೆ ಫೋನ್ ಮಾಡುತಿದ್ದ. ಮೇಘಳಿಗೆ ಕರ್ಣನ ನಂಬರ್ ಗೊತ್ತಿದ್ದರಿಂದ ಅವಳು ಉತ್ತರಿಸುತ್ತಿರಲಿಲ್ಲ ! ಕಳೆದ ಒಂದು ವರ್ಷದಿಂದ ಕರ್ಣ ಮೇಘಳಿಗೆ ಪ್ರತಿ ದಿನ ಮಲಗುವ ಮುನ್ನ ಮೆಸೇಜ್ ಮಾಡುವುದನ್ನು ರೂಢಿಸಿಕೊಂಡಿದ್ದ. ಆದರೆ ಯಾವತ್ತಿಗೂ ಮೇಘ ಇದ್ಯಾವದಕ್ಕೂ ಉತ್ತರಿಸಿರಲಿಲ್ಲ. Loving someone doesn’t make them love you.. 11.59, ಕರ್ಣ ತನ್ನ ಮೊಬೈಲ್ ನಲ್ಲಿ ಸಮಯ ನೋಡಿದ್ದ.,raaji..” dial ಮಾಡಿದ್ದ.. Number busy., ಕರ್ಣ ಕಣ್ಣ್ಮುಚ್ಚಿ ಹೇಳಿಕೊಂಡ “Happy birth day megha..”
ಕರ್ಣ ಮೇಘಳ ರೂಮಿನ  ಕಿಡಕಿಯನ್ನೊಮ್ಮೆ ನೋಡಲು ತಲೆಯಿತ್ತದ, ಎದುರುಗಡೆ ನಿಂತಿದ್ದದ್ದು ಇನ್ಸ್ಪೆಕ್ಟರ್ ರಾಜೀವ್, ಕಾನ್ಸ್ಟೆಬಲ್ ಚಂದ್ರಪ್ಪ ನ ಕೈ ಕರ್ಣನ ಹೆಗಲ ಮೇಲಿತ್ತು., ಸಮಯ ಆಗ 12.00, ಜನವರಿ 10,

                                                                                - ನಿನ್ನದೊಂದು ನೋಟಕ್ಕಾಗಿ ಕಾದು ಕೂತವ..