Sunday 29 June 2014

ಮೌನ..

ಇದೊಂದು ರಾತ್ರಿ ನಾ ಹೇಗೆ ಕಳೆಯಲಿ., ಒಂಟಿತನ ಯಾವತ್ತೂ ನನ್ನ ಹೀಗೆ ಕಾಡಿದ್ದಿಲ್ಲ., ಆದರೆ ಈ ಮನದ ಮೌನ ಯಾಕೆ ನನ್ನನ್ನು ಇವತ್ತು ಸುಡುತ್ತಿರುವುದು ? ರಾತ್ರಿ ಕಳೆದು ಬೆಳಕು ಚೆಲ್ಲಿದಾಗ ಹೊಸದೇನಾದರೂ ಆಗುತ್ತಾ ನನ್ನ ಜೀವನದ ಜಾತ್ರೆಲಿ ? ಸಾವಿರ ಪ್ರಶ್ನೆಗಳು ಹೀಗೆ ಒಮ್ಮೆಲೇ ಹೆಗಲ ಮೇಲೇರಿ ತುಳಿಯುವುದಕ್ಕೆ ಮೊದಲಿಟ್ಟಿವೆ. If you keep rephrasing the question, it gradually becomes the answer !
ತುಂಬಾ ಪ್ರೀತಿಸಿದೆ., ಮಾತು ಕೊಟ್ಟೆ., ನುಡಿದಂತೆ ನಡೆದೆ., ಕೋಟಿ ಕೋಟಿ ಕನಸ ಹೊಸೆದೆ, ತುಂಬಾ ಅಲೆದೆ, ಹಸಿದೆ., ಕರಗಿ ಧಾರೆಯಾದೆ., ಸಂಭ್ರಮಿಸಿದೆ, ಅತ್ತೆ., ಗೊಗೆರೆದೆ., ಬಡಿದಾಡಿದೆ., ಪ್ರೀತಿಗೋಸ್ಕರವೇ ಉಸಿರಾಡಿದೆ., ಕೊನೆಗೆ ಅದೆಷ್ಟು ಸುಲಭವಾಗಿ ಬಿಟ್ಟು ಕೊಟ್ಟೆ.. Six years down the road, all the fights, quarrels, madness, pain will be nothing but a joke..
ಒಂದು ಸಲ ಕಣ್ಣೋರಿಸಿಕೊಂಡು ಹಿಂತಿರುಗಿ ನೋಡಿದರೆ, ನಾ ಆ ಆರು ಸುಧೀರ್ಘ ವರ್ಷಗಳು ಸದ್ದಿಲ್ಲದೆ ಕಡಲಿಗೆ ಕಾಲುವೆ ತೊಡಿದ್ದೆ., ಒಲವು ಹರಿಯಲಿ., ಕಡಲ ಸೇರಲಿ ಎಂದು.. ಅಲೆಯ ಮೊರತಕ್ಕೆ ನನ್ನ ಉಸಿರ ಧ್ವನಿ ಕಡಲಿಗೆ ಕೇಳಿಸಲೆ ಇಲ್ಲವೇನೋ.. ಆ ಪ್ರೀತಿ ನೀರೊಳಗೆ ವೀಣೆ ಮಿಡಿದಂತೆ..
ನಾನಗೆ ನಾನು ಯಾವತ್ತಿಗೂ ಬಯಸಲಿಲ್ಲ., ತಾನಗೆ ಒಲಿದು ಬಂದಳು., ನನ್ನ ಹೃದಯದ ಬೇಲಿಗೆ ಬಳ್ಳಿಯಾಗಿ., ಹೂವಾಗಿ., ಚೆಂದಗೆ ಅರಳಿ., ಘಮ್ ಎನ್ನುತ್ತ., ಹಬ್ಬಿ ನಿಂತಳು., ಆವರಿಸಿದಳು.. ಅಕ್ಕರೆಯ ಸವಿ ಉಣಬಡಿಸಿದಳು, ಚೇಷ್ಟೆಯ ಆಟ ಕಲಿಸಿದಳು., ಪ್ರೀತಿಯ ಮೊಗೆದು ಮೊಗೆದು ಕೊಟ್ಟಳು, ನನ್ನಾಣೆಗೂ ನಾ ಬಯಸಿರಲಿಲ್ಲ., ಕೇಳಿರಲಿಲ್ಲ.. butThe biggest coward is a man who awakens a woman's love with no intention of loving her..” ನನ್ನ ಹುಡುಗಾಟಕ್ಕೆ ಅವಳ ಮನಸ್ಸು ನನ್ನೆಡೆಗೆ ಒಲವ ಬೆಳೆಸಿಕೊಂಡಿತು., ಮೆಚ್ಚಿಕೊಂಡಳು, ಹಚ್ಚಿಕೊಂಡಳು, ನೆಚ್ಚಿ, ನಿಂತು ನೆರಳಾದಳು., ಪ್ರೀತಿಸಿದಳು, ಕಣ್ಣಂಚಲ್ಲಿ ಚುಂಬಿಸಿದಳು, ಕೆನ್ನೆ ತಾಕಿ ಮುದ್ದಿಸಿದಳು., ನನ್ನ ಬೆರಳ ಹಿಡಿದು ತನ್ನ ಕೊರಳ ಹಿಂದೆ ಬೆನ್ನ ಮೇಲೆ ಚಿತ್ತಾರ ಮೂಡಿಸಿಕೊಂಡಳು., ಆದರೆ ನಾ ಎಂದಿಗೂ ಅವಳು ನನ್ನವಳು ಎಂದು ಆಶಿಸಲಿಲ್ಲ., because i always believed that, Love is self-less. If you love someone because they love you back, you are returning a favour not truly loving them.
ಮೋಡ ಮಳೆಯಾಗಿ., ಹನಿಯಾಗಿ ಧರೆಗೆ ಮುತ್ತಿಕ್ಕುವಾಗ., ಆಗಸದ ಕೆಳಗೆ ನಿಂತವ ಅದೆಷ್ಟು ಹನಿಗಳಿಂದ ತಪ್ಪಿಸಿಕೊಳ್ಳಬಲ್ಲ.. ?? ನೆನೆಯಲೇ ಬೇಕು., ನೆನೆದು ತೊಪ್ಪೆಯಾಗಲೇ ಬೇಕು., ಹಿಡಿ ಹಿಡಿಯಾಗಿ ಹನಿಯ ಪ್ರೀತಿಗೆ ಕರಗಲೆ ಬೇಕು.. Great love can make a weak man strong, true love can make brave man fall to his knees.. ಮೊಣಕಾಲುರಿ ನಾ ಅವಳ ಉಸಿರಿನ ಬಂಧಕ್ಕೆ ಅಣಿಯಾದಾಗಲೆ, ನನ್ನಡಿಯ ನೆಲ ಬಿರುಕು ಬಿಟ್ಟಿತ್ತು, ಮೊಳಕೆ ಮೂಡಿಸಿದ ಮೋಡ ಮರೆಯಾಯಿತು.. ಒಂದೇ ಒಂದು ಕಾರಣವೂ ಕೊಡದೆ ಅದೇಕೆ ಸರಿದು ಹೋದಳು., ಭೂಮಿ ಬಯಸದೆ ಮೋಡ ತಾ ಬಂದು ಪ್ರೀತಿ ಬನವ ಬೆಳೆದು., ಬಾಳು ಕಟ್ಟುವ ಮುನ್ನವೇ ಅದೇ ಬನಕ್ಕೆ ಕಾಡ್ಗಿಚ್ಚು ಹಚ್ಚಿದ್ದೇಕೆ ? ಈ ಪ್ರಶ್ನೆಗಳನ್ನು ನಾ ಸಾವಿರ ಬಾರಿ ಕೇಳಿಕೊಂಡರು ಅವಳ ಅಂಗೈ ಸ್ಪರ್ಶದ ನೆನಪಿನ ಹೊರತು ಉತ್ತರ ಸಿಗುತ್ತಿಲ್ಲ.. ನಾ ಕೇಳಬೇಕಿತ್ತೆ ಅವಳೊಗುವ ಮುನ್ನ “ಹೇಳಿ ಹೋಗು ಕಾರಣ” ಅಂತ ? ಗೊತ್ತಿಲ್ಲ. If you leave someone at least tell them why, because what's more painful than being abandoned is knowing you're not worth an explanation..
ಇನ್ನೂ ಈ ಹೊತ್ತು ಕಳೆಯಲೇ ಬೇಕು., ಅವಳಿಲ್ಲ., ನೆನಪುಗಳಿವೆ., ತೀರದ ಮೌನಕೆ ಬಣ್ಣವಚ್ಚಿ ಕಾಯುವೆ ಅವಳಿಗಾಗಿ., ಮತ್ತೆ ಬರುವಳು ಅನ್ನುವ ಹುಚ್ಚು ಕೌತುಕದಿಂದಲ್ಲ., ಅವಳು ಕೊಟ್ಟ ಪ್ರೀತಿ ಮಾಸದಿರಲಿ ಎಂದು.. ಸವೆಯಲಿ ಸಮಯ ಕಾಲದ ಕತ್ತಲಲ್ಲಿ., ನನ್ನುಸಿರ ಕಾದಿಡುವೆ ಪ್ರೀತಿ ಬೆಳಕಾಗಿ ಸಣ್ಣಗೆ ದೀಪ ಉರಿದಂತೆ.. Some have loved and lost. others have never stopped loving the one they lost..

Wednesday 25 June 2014

ಜಗತ್ತಿನಿಂದ ಅಳಿಸಿ ಹೋಗುವ ಮುನ್ನ..

ಹಠ ಮರೆತು ಧಣಿದು ಹಸಿವಿನಿಂದ ಬಂದ ಮಗುವಿಗೆ ಪ್ರೀತಿಯ ಕೈ ತುತ್ತು ಬೇಕಿತ್ತು., ತಾಯಿ ಶಿಕ್ಷಿಸುವ ತಯಾರಿಯಲ್ಲಿ ಕಂದನ ಮೊಣಕಾಲು ಗಾಯವ ಮರೆನೆಂತಂತೆ., ಮೂಕ ಮಗುವಿನ ನಾಲ್ಕು ಸಾಲು ಮನದಲ್ಲೇ ಉಳಿದಿವೆ..
ವಿವರಣೆ ನೀಡುವ., ನಿಜವ ಕಣ್ಣ ಮುಂದೆ ಕಟ್ಟಿಕೊಡುವ., ಆಧಾರ ಹುಡುಕಿ ತೋರುವ., ಮಾಡದ ತಪ್ಪಿಗೆ ಕಾಲಿಗೆರಗಿ ಕ್ಷಮೆ ಕೇಳುವ., ಕಣ್ಣೀರಿಟ್ಟು ಗೊಗೆರೆಯುವ ಯಾವ ಪ್ರಯತ್ನವೆಲ್ಲವು ಈಗ ಅರ್ಥ ಹೀನ., ಬೇರಿರದ ಬಳ್ಳಿಗೆ ಬಿರುಗಾಳಿ ಬಡಿದಾಗ ಉರುಳುವ ಜಾಗದ ಚಿಂತೆಯೇ ? ಓಂ ಅನ್ನೋ ಒಂದೂವರೆ ಪದದ ಪ್ರೀತಿಯ ಮುಂದೆ., ಸತ್ಯ ಅನ್ನೋ ಎರಡೂವರೆ ಪದದ ಸುಳ್ಳು ನಿನಗೆ ಬೇಕಾಗಿದೆ.. ಅನುಮಾನಕ್ಕೆ ಪಾರಿತೋಷಕವಾಗಿ ಸಿಕ್ಕ ಸಾವಿನ ಖುಷಿ ಆ ಬಳ್ಳಿಯಲಿ ಚಿಗುರೊಡೆದ ಹೂವಿಗೆ..  ಬಾಯಾರಿ ಸೂರ್ಯ ಬಿಸಿಲಾಗಿ ನಿಂತಾಗ ಸಾಗರವು ಬರಿದಾಗಿದೆ..
ನಿನ್ನನೆಂದು ನಾ ಆಶಿಸಲಿಲ್ಲ., ಪ್ರೀತಿಸಿದೆ.. ಬಯಸಿಲ್ಲ., ಕನಸ ಕಂಡೆ.. ಮೋಹಿಸಲಿಲ್ಲ ರಚ್ಚು., ಪೂಜಿಸಿದೆ.. ಸ್ನೇಹಕ್ಕು ಮಿಕ್ಕಿದ., ಕಾಮಕ್ಕೂ ನಿಲುಕದ., ಇಚ್ಚೆಗು ಮೀರಿದ ಜೀವದ ತುಡಿತ ನಿನ್ನೆಡೆಗೆ ನನಗಿದದ್ದು.. ಎಲ್ಲವನು ಸುಳ್ಳೆಂದು ನಿಂತ ಜಾಗದಲ್ಲೇ ಗೋರಿ ಕಟ್ಟಿ ಬಿಟ್ಟೆಯ ಕ್ಷಣ ಮಾತ್ರದಲ್ಲೆ ?
ಸಾವಿರ ನೋವಿನ ಮಾತು ಬೇಕಿಲ್ಲ ಈ ಕ್ಷಣ.. ನಿನ್ನದೊಂದು ಸ್ಪರ್ಶದ ನೆನಪು ಸಾಕು ಎಲ್ಲವ ಮರೆಸಿ ತೂಗಿ ನಿನ್ನೋಲವಿನ ಮಾಡಿಲ್ಲಲಿ ಮಲಗಿಸೋಕೆ.. ದೋಣಿಲಿ ಹುಟ್ಟೊಂದು ಕೈ ತಪ್ಪಲು., ನಡು ನೀರೇ ದಡ ನೀಡಿ ನೆರವಾದಂತೆ.. ಹಾಡೊಂದು ಹೊರಟಾಗ ಕಾಡುಗತ್ತಲಲ್ಲಿ., ಧನಿಯೊಂದು ಜೊತೆಗೂಡಿ ಬೆಳಕಾದಂತೆ..
ಈ ಜನುಮವೆಲ್ಲ ಬರಿ ನಿನ್ನ ಸ್ಪರ್ಶದ ಬಗೆಗೆ ವಿವರಿಸುತ ಕಳೆವೆ., ಇನ್ನೊಂದು ಸಾವಿರ ಜನುಮ ಉಳಿಯಲಿ ನೋವಿನ ಸಾಗರದಲ್ಲಿ ಮುಳುಗಲು., ನಿನ್ನ ಸ್ಪರ್ಶದ ಕಥೆಯ ತಂಪಿಗೆ ಈ ಮರಳ ದಡವು ತಂಪಾಗಬಹುದೇನೋ.. ಮಿಂಚೋಂದು ಕಿಡಿ ಕಾರಿ ಆಕಾಶ ಚಲುವಾದ ಹಾಗೆ..
ಹಸಿಗೂಸಿಗೆ ತಿಳಿ ಬೆಚ್ಚನೆಯ ನೀರಲ್ಲಿ ಸ್ನಾನವ ಮಾಡಿಸಿ., ಮೃದು ಬಟ್ಟೆಯಲಿ ಸುತ್ತಿ., ಹಾಗೆ ಒಮ್ಮೆ ಘಮ್ ಎನ್ನುವ ಸಾಂಬ್ರಾಣಿ ಹೊಗೆಗೆ ಅದರ ಮೈ ಆಡಿಸಿ ಎತ್ತಿ ತಬ್ಬಿದಾಗ ನೇರ ಎದೆ ಸೇರಿದ ಪ್ರೀತಿಯ ಘಮದಂತೆ ಕಣೆ ನಿನ್ನ ಸಾಂಗತ್ಯ.. ಹಬ್ಬಿದ ಬಳ್ಳಿಯಲಿ ಸಂಜೆ ಮೈಗೆರೆದ ಕಾಡು ಮಲ್ಲಿಗೆಯ ಮೊಗ್ಗು ನೀನು.. ನಸುಕಿನ ಮಂಜಿನಲ್ಲಿ ತುಳಸಿ ಎಲೆಯ ತುದಿಯಲಿ ಉಳಿದ ತಣ್ಣನೆ ಹಿಬ್ಬನಿ ನೀನು.. ನಿನ್ನ ಮೃದು ಕಿವಿಯ ಕೊನೆಯ ಮುಟ್ಟಿದ ಕ್ಷಣವೆ ಅಲ್ಲೆಲ್ಲೋ ಜಲಪಾತ ಸದ್ದಿಲದೇ ಭೋರ್ಗೆರೆದಿತ್ತು.. ನಿನ್ನ ಹಣೆಯ ಮೇಲಿಂದ ಮುಂಗುರುಳ ನೀವಿ ಹಿಂದಕ್ಕೆ ಸರಿಸಿದ ನಿಮಿಷವೇ., ಅಲ್ಲೆಲ್ಲೋ ಹಸಿರು ಪೈರೊಂದು ತೆನೆಯಾಗಿ ಅರಳಿ ನಿಂತಿತ್ತು..
 ಜೀವದ ಉಸಿರೆಲ್ಲ ನಿನ್ನೆದೆಯಲ್ಲಿ ಬಚ್ಚಿಟ್ಟು ನಿರುಮ್ಮಳವಾಗಿ ನಿನ್ನ ನಗುಮೊಗವ ನೋಡುತ ಕಳೆದು ಹೋಗಿದ್ದ ನನ್ನ ಎಬ್ಬಿಸಿ., ನೀ ಜಗವನ್ನೇ ಬಿಟ್ಟು ಹೋದರೆ ಚೆಂದ ಅಂದೆಯ ? ಬೆಚ್ಚಿ ಬೀಳದಿರು ನನ್ನೊಲವ ಕನಸಿಂದ., ಬೆಂಕಿಯ ಕಡ್ಡಿ ಗೀರಿ ಮನೆತುಂಬಾ ಬೆಳಕಾದ ಹಾಗೆ., ಸುಟ್ಟು ಬಿಡು ನನ್ನೆಲ್ಲಾ ನೆನಪನ್ನು., ಸಿಗಲಿ ನಿನಗೆ ಬೇಕಾದ ನಿಜವೆನ್ನುವ ಬೆಳಕು., ನನ್ನ ಜೀವದ ಉಸಿರಿನ ಮಾತದು.. ಕೇಳದೆ ಇರುವೆನೇ ನಾನು ? ನಿನಗಾಗಿ ಮುಡಿಪು ಈ ಜೀವದ ಮಿಡಿತ..  

Wednesday 18 June 2014

ಕತ್ತಲ ಕೋಣೆಯ ಬೆಳಕಿನ ಕಿಟಕಿಯೆಡೆಗೆ ಮುಖ ಮಾಡಿ ಬರೆಯಲು ಕೂತಿರುವೆ..

ಕತ್ತಲ ಕೋಣೆಯ ಬೆಳಕಿನ ಕಿಟಕಿಯೆಡೆಗೆ ಮುಖ ಮಾಡಿ ಬರೆಯಲು ಕೂತಿರುವೆ., ಬರೆಯಲಾದರೂ ಏನನ್ನು ? ನಿಜ ಹೇಳಿದರು ಕಿವಿ ಹಿಂಡಿದ ಅಪ್ಪನ ಬಗ್ಗೆಯಾ ? ಮಾಡದ ತಪ್ಪಿಗೆ ದೂಷಿಸಿ ಮಾತು ಬಿಟ್ಟ ಅಮ್ಮನ ಕುರಿತ ? ನಿಂತು ನೀರಡಿಸದೆ ಸರಿದು ಹೋದ ಮೋಡದ ಬಗ್ಗೆಯಾ ? ಕೂಗಿ ಕರೆದರು ಕೇಳದೆ ಹೋದ ಅಂತರಾಳದ ಬಗ್ಗೆಯಾ ? ನನ್ನುಸಿರಿನಲ್ಲಿದ್ದು ಮಿಡಿತವ ಅರಿಯದೆ ಹೋದ ನಿನ್ನ ಬಗ್ಗೆಯಾ ??
ಇದು ಯಾರ ಮೇಲಿನ ಕೋಪವಲ್ಲ., ಅಸಮಾಧಾನವೂ ಅಲ್ಲ., ಇದು ನಾ ಯಾರಿಗೂ ಅರ್ಥವಾಗದೆ ಹೊದೆನಲ್ಲ ಅನ್ನೋ ಬೇಸರ., ಕೊನೆಗೆ ನಿನಗೂ ಸಹ ನಾ ಅರ್ಥವಾಗಲಿಲ್ಲವಲ್ಲ., ಅದಕ್ಕೆ ನನ್ನ ಮೇಲೆ ನನಗೆ ತೀರದ ಬೇಸರ..
ಈ ದಿನ., ಈ ಕ್ಷಣವೇ ತೂಗಿ ಲೆಕ್ಕ ಹಾಕಿಬಿಡಬೇಕು., ತುಂಬು ಪ್ರೀತಿಯಿಂದ ತಂದ ಕೈ ತುತ್ತು ತೂಕವೋ., ಅಷ್ಟೇ ಕೋಪದಿಂದ ಆ ತುತ್ತನ್ನು ನೆಲಕ್ಕೆ ಒಗೆದ ಕೋಪ ಭಾರವೋ ? ಪ್ರೀತಿಯ ಬೆನ್ನಿಗಿರುವ ಒಲವು., ಕೋಪದ ಹಿಂದಿನ ನೋವು., ಈ ಲೆಕ್ಕಕ್ಕೆ ತೂಕದ ಕಲ್ಲಾಗಿವೆ..
ಕಾರಣವ ಬೆನ್ನತ್ತಿ ಹೊರಡುವ ಮುನ್ನ., ಒಂದೇ ಒಂದು ಸರಿ ನನ್ನ ಕಣ್ಣನ್ನು ಕೇಳಿದ್ದರೆ ನೀ ? ಇಷ್ಟು ದೂರ ನನ್ನಿಂದ ಹೀಗೆ ಸುಖ-ಸುಮ್ಮನೆ ನಡೆದು ಹೋಗುವ ನಿರ್ಧಾರ ಮಾಡುತ್ತಿರಲಿಲ್ಲ., ನೀ ಬಯಸಿದ್ದು ಆಧಾರವನ್ನು ಅಲ್ವಾ ? ಅಂಕಿಗಳಂತೆ ನನ್ನ ಎಣಿಸಿ ಲೆಕ್ಕ ಹಾಕಿ ನೀ ಇಷ್ಟೇ ಅಂತ ಹೇಳಿಬಿಟ್ಟೆ..
ಇದಕ್ಕೆ ಕಾರಣ ಹುಡುಕುವ., ಅಥವಾ ನಿನ್ನ ಲೆಕ್ಕಾಚಾರ ಸರಿಯಲ್ಲ ಎಂದು ಸಾಧಿಸಿ ತೋರುವ ಯಾವ ಪ್ರಯೋಗವು ನಾ ಖಂಡಿತ ಮಾಡಲಾರೆ., ನಿನ್ನೆಡೆಗಿನ ನನ್ನೊಲವನ್ನು ಓರೆಗೆ ಹಚ್ಚಿ ನೋಡಲು ಹೊರಟ ನಿನಗೆ ಅದು ತಿಳಿದರೆ ಚೆನ್ನ..

ನಿನ್ನ ಲೆಕ್ಕಕ್ಕೆ ನಿಜ ಅರ್ಥ ಸಿಕ್ಕ ದಿನ ನನ್ನ ಮನದ ಮನೆಯ ಮುಂದೆ ಬೆಳಕು ಹರಿದಿರುತ್ತದೆ.. ತುಂಬಾ ದಿನದಿಂದ ಹೊರ ಬರದೇ, ಆಚೆಗಿರುವ ಗೆಟನ್ನೇ ದಿಟ್ಟಿಸಿ ಕೂತಿರುವೆ., ಹಾಗೆ ಸುಮ್ಮನೆ ಉದುರಿ ಬಿದ್ದಿರುವ ಭಾವನೆಯ ಎಲೆಗಳ ಮೇಲೆ ಕಾಲೂರಿ ನೀ ಬರುವುದನ್ನೇ ಕಣ್ಣು ಮಿಟುಕಿಸುತ ಇದೇ ಕಿಟಕಿಯ ಸರಳುಗಳ ನಡುವಿಂದ ನೀ ಬರುವ ದಾರಿ ಕಾಯುತ..

Tuesday 3 June 2014

ಅದೆಷ್ಟೋ ಬಾರಿ..

ಪದಗಳನೆಲ್ಲ ಗುಡ್ಡೆ ಹಾಕಿಕೊಂಡು ಕೂತಿದಿನಿ., ಹೊರಗೆ ಭಾವನೆಗಳ ಸುರಿಮಳೆ ಜೋರಾಗಿದೆ. ಅಲೆಲ್ಲೋ ದೂರದಲ್ಲಿ ಕಲ್ಲಾಗಿದ್ದ ಹಿಮ ಪರ್ವತ., ಒಲವ ಹೊಂಬಿಸಿಲಿಗೆ ಕರಗಿ ನೀರಾಗಿ., ಹೊಳೆಯಾಗಿ., ನದಿಯಾಗಿ ಕಡಲೆಡೆಗೆ ಸಾಗಿದಂತೆ., ಇಲ್ಲೊಂದು ಜೀವ ನಿನ್ನ ಸೇರಲು ಹವಣಿಸಿದೆ..
ನೀ ಸರಿವ ಸದ್ದಿಗೆ ನನ್ನ ನಾ ತಡೆಯಲಾಗದೆ ಹಿಂಬಾಲಿಸುತ್ತಿರುವೆ., ನಾ ನಿನ್ನ ಆಂತರ್ಯದೊಳಗೆ ಅಂಬೆಗಾಲಿಡುತ್ತಾ ನಿನ್ನೆದೆಯ ಹೊಸಲಿನೆಡೆಗೆ ಬರುತ್ತಿರುವಂತೆ.. ತುಂಬಾ ಮೌನಗಳ ನಂತರ ಮಾತು ಹಿತವೆನಿಸಬಹುದು., ಮುಂಜಾವು ಮನೆ ಹೆಂಚಿಂದ ತೊಟ್ಟಿಕುತ್ತಿರುವ ಮಳೆ ಹನಿ ಪಿಸುಗುಟ್ಟುವ ಹಾಗೆ.. ಇಷ್ಟು ದಿನಗಳ ಮೌನ ಕಹಿ ಎನಿಸಿದ್ದರೆ ಕ್ಷಮಿಸು..
ಹಾಳೆ ಹರಿದು., ದೋಣಿ ಕಟ್ಟಿ ಬಿಡುವ ಆಟ ಕಲಿಸಿದ ನಿನ್ನ ಅಂಗೈ ಸ್ಪರ್ಶ ಇನ್ನೂ ತಂಪಾಗಿ ನನ್ನ ಬೆರಳಂಚಿನಲ್ಲೇ ಉಳಿದು ಹೋಗಿದೆ.. ನಿನ್ನ ಪಾದದ ನೀರಚ್ಚು., ಮೆಟ್ಟಿಲ ಮೇಲೆ ಆರದೆ ಅಚ್ಚಾಗಿದೆ.. ಇದ್ದು ಬಿಡು ನನ್ನೊಂದಿಗೆ ಹೀಗೆ ಮಳೆಯಲಿ ಆಡುತ್ತಾ..  
ಅದೆಷ್ಟೋ ಬಾರಿ., ಅದೇನೋ ಹೇಳಲು ಬಂದವನು ಮಾತನ್ನುಳಿಸಿಕೊಂಡು ಹಿಂತಿರುಗಿ ಬಂದಿರುವೆ.. ಸೋತ ಹೃದಯ ಕಂಡ ಕನಸು ನಿಜವಾಗಲೆಂದು ಬಯಸಿ ನಗೆ ಬೀರಿದೆ.. ಇರುಳು ಜಾರಿ., ಕನಸು ಕರಗಿ ಮುಂಜಾನೆ ಕಣ್ಣುಜ್ಜಿ ಎದ್ದ ಕೂಡಲೇ ನಿನ್ನ ಮುಂಗುರುಳ ನಡುವೆ ನಗುವ ನಿನ್ನ ಕಣ್ಣ ಮುದ್ದಿಸುವ ಕನಸದು.. ನಿನ್ನ ಜಿಗರೆಯಂತ ವೇಗದ ನಡುವೆ ಹೆಡ್ಡನಾಗಿ ನಿನ್ನೆ ನೋಡುತ್ತಾ ಕೂತ ಕನಸದು.. ಸುಮವ ತುಂಬಿ ಮನೆ ತುಂಬಾ ನಿ ಅರಳಿರಳು., ಮೈ ಮರೆವಂತೆ ನಿನ್ನ ತಬ್ಬಿದ ಕನಸದು..
ನೀಲಿ ಆಗಸಕ್ಕೆ ಪುಟ್ಟ ಹಕ್ಕಿಯೊಂದು ಪ್ರೀತಿಸಿ ಮಲ್ಲಿಗೆ ಮೂಡಿಸಿದ ಹಾಗೆ., ಪದಗಳಲಿ ಕನಸ ಜೋಡಿಸಿ ಮುಂದಿಟ್ಟಿರುವೆ., ಈ ಎಲ್ಲಾ ಕನಸು ನೀ ನಿನ್ನದಾಗಿಸಿಕೊಳ್ಳಬೇಕು ಎಂಬ ನೀರಿಕ್ಷೆಗಳಿಲ್ಲಾ., ಹೊರಗೆ ಹೆಂಚಿಂದ ಮಳೆ ಹನಿ ಹಾಗೆ ತೊಟ್ಟಿಕ್ಕುತ್ತಿರಲಿ., ಆ ಸದ್ದಿನ ನಡುವೆ ನಿನ್ನೊಂದಿಗಿನ ಮುಂಜಾವಿನ ಈ ಸವಿಗನಸು ಹೀಗೆ ಸಾಗುತಿರಲಿ., ಇದಕ್ಕಿಂತ ಹೆಚ್ಚು ಇನ್ನೇನು ಬಯಸಲಿ ? ಕನಸಲ್ಲಾದರೂ ಸರಿ., ಕಣ್ಣುಜ್ಜಿ ಏಳುವ ವೇಳೆಗೆ ಇರುವೆಯ ನೀ ನನ್ನೆದುರು..?